Sunday, 21 June 2015

When the heart Cries

Somewhere on the road of life i am lost
the heart cries seeing the injustice in this world -
    so-called 'humans' taking away the newborn kitten from the mother to throw them  away;
    those roaming puppies without knowing what to do
    and the list goes on.


My heart doesn't trust in God anymore;
Now don't feel like saying 'thank God' for each day-to-day favour I get;
Hey God, if you are there - stop this injustice at this instant;
or else, how can I get myself to pray you daily hereafter?


My God, you were always there for me,
But why not for those innocent pups and kitten and
all those guileless babies who suffer in the hands of so-called 'humans'.


Can you cut those hands at the moment when it is doing the mistake?
There is no use to give back after a year or after a birth -
 when people can't remember what they are paying for.
Hey God, will you answer me please?

Friday, 12 June 2015

ಒಂದೇ ಚಿಟ್ಟೆ, ಎರಡು ದೃಶ್ಯಕೋನಗಳು

ಒಂದೇ ಚಿಟ್ಟೆ, ಎರಡು  ದೃಶ್ಯಕೋನಗಳು 



ನನ್ನ ನೋಡದಿದ್ದರೆ ನೀವೇನೂ ಕಳೆದುಕೊಳ್ಳುವುದಿಲ್ಲ
ನೋಡಿದರೆ ಏನೂ ಪಡೆದುಕೊಳ್ಳುವುದಿಲ್ಲ
ಆದರೂ ನಿನಗೇಕೆ ಚಪಲ
ನನ್ನ ದೃಶ್ಯವ ಸೆರೆ ಹಿಡಿಯಲು?

Saturday, 20 December 2014

ಕಂದಮ್ಮ

ಅಂದದ ಚಂದದ ಕಂದನೇ 
ನಿನ್ನ ನೋಡಿದ ಮೊಗ್ಗು ಹೂವಾಗಿ ಅರಳಿದೆ ।

ಬಾನಲಿ ಮೂಡಿದ ರವಿಯು ನಿನ್ನ ನೋಡಿದಾ 
ಮತ್ತಷ್ಟು ಬಣ್ಣವ ಬಾನಲ್ಲಿ ತುಂಬಿದಾ ।ಅಂ।






Sunday, 18 May 2014

My pics

Please don't ask me to share my food!

Keep a watch in all directions!

'Gubbachchi' on viewing its image in window's mirror glass

Rare view of colorful parrots lining up on the wires.

This is not a  circus show!

Tuesday, 19 November 2013

ಲಾಲಿ ಹಾಡು

ಲಾಲಿ ಹಾಡು
--------------

ಮಲಗು ಮಲಗು ನೀ ರಾಜ ಕುಮಾರಿ (ರಾಜ ಕುಮಾರಾ)
ಮಲಗು ಮಲಗು ನೀ ಪುಟಾಣಿ  ಕಂದಾ

ಮಲಗು ಮಲಗು ನೀ ಅಮ್ಮನ ಲೋಕ
ಮಲಗು ಮಲಗು ನೀ ಅಪ್ಪನ ಕಣ್ಮಣಿ
ಮಲಗು ಮಲಗು ನೀ ಅಜ್ಜನ ಮುದ್ದು
ಮಲಗು ಮಲಗು ನೀ ಅಜ್ಜಿಯ  ಪ್ರೀತಿ

ಮಲಗು ಮಲಗು ನೀ ರಾ.. ।।


ಗಣಪನು ಬರುವನು ಕನಸಿನಲಿ
ಉಂಡೆಯ ಕೊಡುವನು ಪ್ರೀತಿಯಲಿ
ಆಟವ ಆಡು ನೀ ಇಲಿಯ ಜೊತೆ
ಕೇಳು ನೀ ದೇವರ ಸದ್ಬುದ್ಧಿಯ  ಮತಿ
 
ಮಲಗು ಮಲಗು ನೀ ರಾ.. ।।

Saturday, 7 September 2013

ಚಿಣ್ಣರ ಪದಗಳು

ಮಳೆ ರಾಜ
---------------
ಡುಂ  ರಾಜ ಬಾರಿಸ್ತಾನೆ  , ಡುಂ ಡುಂ ಡುಂ .
ಮಿಂಚ್  ರಾಣಿ ಛಳಕಿಸ್ತಾಳೆ , ಛಳ್ ಛಳ್ ಛಳ್.
ಮಳೆ ರಾಜ ಸುರೀತಾನೆ , ಧೋ ಧೋ ಧೊ.
ಅಮ್ಮ ನಂಗೆ ಚಕ್ಲಿ ಬೇಕು , ಕುರುಂ ಕುರುಂ ಕುರುಂ.


ತಟ್ಟೆ ಚಂದ್ರ
-------------

ಅಮ್ಮ ನಂಗೆ ಊಟ ಬೇಕು। ಬೆಳ್ಳಿ ಬೆಳಕಿನ ತಟ್ಟೇಲಿ ।।
ರಾತ್ರಿ ಬಾನಲಿ ನೋಡ್ತೀವಲ್ಲಾ । ಅದೇ ಗೋಲದ  ತಟ್ಟೆಲೀ ।।
ಮಾವಿನ ಹಣ್ಣ ಬೀಳಸ್ತೀವಲ್ಲಾ । ಅದೇ ಉದ್ದದ  ಕೊಕ್ಕೇಲಿ ।
ಈ ತಟ್ಟೇನೂ  ಬೀಳಿಸ್ಬಿಡು । ಪ್ರೀತಿಲಿ ನಂಗೆ ಅಂತ್ ಹೇಳಿ ।।


ಚಂದ್ರಣ್ಣ
--------
ಚಂದಿರ ನಾನು , ಜೊತೆಗೆ ನಿನ್ನ,
   ಬರುವೆ ಭೂಮಿ ಸುತ್ತಲು.

ಹೇಗೆ ನಾನು , ಬರಲಿ ನಿನ್ನ
   ಬಳಿಗೆ, ನೀನೆ ಹೇಳ್ಬಿಡು .

ನಾನು ನೀನು ಮಾತಾಡೋಣ,
   ಆಟಾನೂ ಆಡೋಣ .

ನಾನು ನಿನ್ನ ಹೆಗಲನು ಹಿಡಿದು
   ಜೋಕಾಲಿ ಆಡುವೆ ಚಂದ್ರಣ್ಣ .








ಮನದೊಡನೆ ಮಾತು

ಜೀವನವು ಸಾಗರವಲ್ಲ, ಇದು ಹರಿಯುವ ನದಿ.
ಪ್ರತಿಯೊಂದು ಕ್ಷಣವೂ ಜಾಗ ಬದಲಾಯಿಸುವ ನೀರು .
-----------------------------
ಸಾವಿನ ಹೆದರಿಕೆ ಬೇಡ,
ಸಾವು ನಿತ್ಯ ಸತ್ಯ.
 --------------------------
ಮನವು ನಿಂತಿದೆ ಚಲಿಸದೆ,
ಜಗವು ಹರಿಯುತಿದೆ ತನ್ನಷ್ಟಕ್ಕೆ .
ಇದೆಂಥ  ಜೀವನ ಬರಡು  ಹೊಲ,
ಯಾವ ದಿಕ್ಕಿಗೂ ಫಲ ಬಿಡದ ಬರಿದೆ ಮರ.
 ----------------------------------

 
----------------------------------------------