Tuesday, 26 October 2021

ಅಪ್ಪಾ..ನಿನ್ನ ನೆನಪು

 ಅಪ್ಪಾ..

ನಿನ್ನೆನಪಿನ ಬತ್ತಳಿಕೆಯ ಬಾಣಗಳು 

ಸುತ್ತುವರಿದಿವೆ ನನ್ನೆದೆಯ ಗೂಡಾ.


ಹಲವು ಸವಿಯ ಮೆಲುಕು ..

ಕೆಲವು ನೋವ ಮಿಡಿಪು.


ನೀನಿನ್ನು ನೆನಪು ಎಂಬ ವಾಸ್ತವ..

ಮರಳಿ ಮರಳಿ ಅನಿಸುತಿದೆ..ಇದು ದಿಟವಾ?


ಅಪ್ಪಾ..

Wednesday, 22 September 2021

ರಾತ್ರಿಯಲಿ ಬೆಳದಿಂಗಳಾ

ರಾತ್ರಿಯಲಿ ಬೆಳದಿಂಗಳಾ ।
ಕರೆಯುತಲಿ ಮನೆಯಂಗಳಾ ।
ಸವಿಯುತಲಿ ಮನದಂಗಳಾ ।
ಮರೆಯುತಲಿ ಮನ ವಾಂಛಲಾ ।
ಮೆರೆಯುತಲಿ ಸಿಹಿ ಹಂಬಲಾ ।

Sunday, 14 March 2021

ಅವಸsssರ ಮಾಡಬ್ಯಾಡಾ

 ಗಡಿಬಿsssಡಿ  ಗುಂಡಪ್ಪಾ 

ಅವಸsssರ ಮಾಡಬ್ಯಾಡಾ। 


ಒಂದಾssದ ಮೇಲೊಂದು 

ಕೆಲಸಾssನ ಮಾಡ್ಕೊಂಡು ।


ಗಾಡೀssನ ಹೊಡ್ಕೊಂಡು 

ಒಮ್ಮೊಮ್ಮೆ ತಳ್ಕೊಂಡು ।


ಗಡಿಬಿsssಡಿ  ಗುಂಡಪ್ಪಾ 

ಅವಸsssರ ಮಾಡಬ್ಯಾಡಾ। 


ss  --> ರಾಗ ಎಳೆಯುವುದು 

Saturday, 6 March 2021

ಮಾವು

 


ಮಾವಿನ ಆಸ್ವಾದ.
ನೆನಪಿಸಿದೆ
ಬಾಲ್ಯದ ಆಹ್ಲಾದ. 

ಮಳೆ


ನೀ ಬಂದರೆ  ಓಡುವರು  ಎಲ್ಲ
   ಹತ್ತಿರದ ನೆಲೆಗೆ.
ನಿನ್ನಲ್ಲಿ ಮಿಂದವನೇ ಬಲ್ಲ
   ಆ ಸಂತಸದ ಸಲಿಗೆ .


ಗೌಮ್ಯ ನಾನು

ವ್ಯಕ್ತಕೆ ಅತಿರಿಕ್ತ ನಾನು.

ಸ್ನಿಗ್ಧ ಸಾಗರದೊಳು ಲುಪ್ತ ನಾನು.

ಗೌಮ್ಯ ನಾನು.

ಪರಮೇಶ್ವರಾ

ಗಂಗಾಧರಾ ಘಾಟೇಶ್ವರಾ 

ಗವಿಯಲ್ಲಿ ನೆಲೆಯಾದ ಸಿದ್ ಧೇಶ್ವರಾ ।।


ಮುರ್ಡೇಶ್ವರಾ ಚಂಡೇಶ್ವರಾ 

ನೆಲದಲ್ಲಿ ಬಲವಾದ  ಮ್ಹಾ ಬ್ಲೇ ಶ್ವರಾ ।।


ಧಾರೇಶ್ವರಾ ಗುಣೇಶ್ವರಾ 

ನೆನೆದವರ ಮನದಲ್ಲಿ ಮಧುಕೇಶ್ವರಾ ।।


ಸಜ್ಜೇಶ್ವರಾ ಮಂಜೇಶ್ವರಾ 

ಪಾರ್ವತಿಯ ಸಾನ್ನಿಧ್ಯ ಪರಮೇಶ್ವರಾ ।।