Thursday, 17 March 2016

ಅಂತರಾಳ

ಅಂತೂ ತೆರೆದಿದೆ ಅಂತರಾಳ । ತುಮುಲವು ನೀಗದು..  ಮಾತೇ ಬಾರದು ।
ಅಗೆದು ನೋಡಲು ಮನದ ಆಳ । ತಳವೇ ಕಾಣದು.. ದಿಕ್ಕೇ ತೋಚದು ।

Friday, 15 January 2016

ಕಂದ ಅಥರ್ವ


ಅಥರ್ವ ನಿನ್ನ ಆಟಾ। ಹಾಸಿದೆ ಒಲವಿನ ತೋಟಾ ।।

ಅಥರ್ವ ನಿನ್ನ ನೋಟಾ । ನಮಗೆ ಅರಿವಿದೆ  ತುಂಟಾ ।
ಅಥರ್ವ ನಿನ್ನ ಓಟಾ । ಹಿಡಿವುದೇ ನಮಗೆ ಕಷ್ಟಾ ।।

ಅಥರ್ವ ನಿನ್ನ ಆಟಾ। ಹಾಸಿದೆ ಒಲವಿನ ತೋಟಾ ।।

ನೀ ಬೆಲ್ಲದ ಅಚ್ಚು । ಕರೆವೆ  ನಾ ಪೀಕಚ್ಚು ।
ನೀ ಎಲ್ಲರ ನೆಚ್ಚು ।  ಸುರಿದಿದೆ ಮುದ್ದು ಹೆಚ್ಚು ।।

ಅಥರ್ವ ನಿನ್ನ ಆಟಾ। ಹಾಸಿದೆ ಒಲವಿನ ತೋಟಾ ।।


ಎಮ್ಮನೆ  ರಾಜಕುಮಾರಾ । ನಮ್ಮ ಪ್ರೀತಿಯ ಸಾರಾ ।
ನೀ ಕುಲದಾ ಪ್ರವರಾ। ಸಂತಸದಾ ಸರದಾರ ।।

ಅಥರ್ವ ನಿನ್ನ ಆಟಾ। ಹಾಸಿದೆ ಒಲವಿನ ತೋಟಾ ।।


Tuesday, 12 January 2016

ಮುದ್ದು ಕಂದಮ್ಮ


ಮುದ್ದು ಕಂದಮ್ಮ ನಿನ್ನ  ಮೈ ಮೃದು ಹತ್ತಿಯಂತೆ ।
ಮುಖ ಕಮಲದಲ್ಲಿ ಮುಗುಳು ನಗೆ ಸಿಹಿ ಜೇನಿನಂತೆ ।।

ಪುಟ್ಟ ಹೆಜ್ಜೆಯಿಟ್ಟು ನಡೆದಾಗ ಮನವೆನ್ನ  ತುಂಬಿದಂತೆ ।
ತೊದಲು ನುಡಿದಾಗ ನೀ ಹೃದಯ ಹಿಗ್ಗಿದಂತೆ ।।

(ಈ ಹಾಡಿಗೆ ಸ್ಪೂರ್ತಿ : ಮುದ್ದು ಕಂದಮ್ಮ 'ಅಥರ್ವ')


Sunday, 10 January 2016

ಮನವೆಂಬ ಗುಬ್ಬಚ್ಚಿ


ಕಾSಡು.ವ ನೆನಪುss   ಮುತ್ತಿ.ಕೊಂಡಿದೆ ಎನ್ನ ।
ತೋಚ.ದಾಗಿದೆ ಎಂತುS ಬಿಡಿಸಿಕೊಳ್ಳಲಿ ನನ್ನ ।।

ತೆಗೆದಿಟ್ಟ ಹೆ.ಜ್ಜೆ ಹಿಂದೆ ಎಳೆಯುವ ಮುನ್ನ ।
ಮುಂದೆ ತಳ್ಳುವ ಧೈರ್ಯ ಯಾರಿ.ಗಿದೆಯೋs  ಇನ್ನ ।।

ಅಂತೂ ನಡೆಯಿತು ಮನದ ಮಂಥನ ।
ಹೊರಬಿದ್ದ ಗುಬ್ಬಚ್ಚಿ ಹೇಳಿತು ಸಾಂತ್ವನ --

'ಮುಂದೆ ಇಟ್ಟರೂ ಹೆಜ್ಜ್ಜೆ ನಿನ್ನದು
ಹಿಂದೆ ನಿತ್ತರೂ ಹೆಜ್ಜೆ ನಿನ್ನದೇ।

ನಿನ್ನ ಜೀವನದ ಇಷ್ಟ ಕಷ್ಟ
ನಿನ್ನಲ್ಲೇ ಇದೆ ಅದು ಸ್ಪಷ್ಟ ।"

ಕಾsಡು.ವ ನೆನಪು ಮನ್ನಿಸಿ ಹಾರಿಹೋಯಿತು।
ಮನದಲ್ಲಿರುವಾ  ಗುಬ್ಬಚ್ಚಿ ಗರಿಬಿಚ್ಚಿ  ನಿಂತಿತು।।


Sunday, 20 December 2015

ವೈಕುಂಠ ಏಕಾದಶಿಗೆ ದೇವರ ಹಾಡು

ವೈಕುಂಠದೊಡೆಯ ವೈಕುಂಠ ನಾಥ 
ಹಸನ್ಮುಖಿ ನೀ ಸದಾ ಶಾಂತ ।।

 ನೀ ಗೋಪಿನಾಥ 
ನೀ ಲಕ್ಷ್ಮಿಕಾಂತ ।।

ನೀ ಸರ್ವ ಶಕ್ತ 
ನೀ ಜಗದ-ಅನಂತ ।।



Wednesday, 2 December 2015

ಬಾನಿನಾಟ - ಚಿಣ್ಣರ ಹಾಡು - (ಇನ್ನೂ ಪೂರ್ತಿಯಾಗಿಲ್ಲ - work in progress )


ಭೂssಮಿಯು ಸು.ತ್ತಿದೆ ಸೂssರ್ಯನ ಸುತ್ತಾ  ।
ಚಂssದ್ರನು ಸು.ತ್ತಿದ ಭೂssಮಿಯ ಸುತ್ತಾ  ।
ಲಾss  ಲಲ.   ಲಾss ಲಲ. ಲಾss ಲಲಲಾ ।।

ಸುಂದರ ಮುಂಜಾನೆ - ಚಿಣ್ಣರ ಹಾಡು


ಬೆಳ್ಳಂ ಬೆಳಿಗ್ಗೆ ಸೂರ್ಯನ ಕಿರಣ   ಸೋ. ಕಿ. ತುsss ।
ಛಳಿಯೆಲ್ಲ ಓಡಿ  ಹೋ. ಯಿ. ತುsss  ।
ಧೀಂ ತನ ಧೀಂ ತನ ಧೀಂ ತನ ನನನಾ ।।

ತಂತಾನೆ ನವಿರಾದ ಗಾಳಿ  ಬೀ. ಸಿ. ತುsss ।
 ಹಣೆ ಮೇಲೆ ಮುಂಗುರುಳು  ಹಾ. ರಿ. ತುsss ।
ಧೀಂ ತನ ಧೀಂ ತನ ಧೀಂ ತನ ನನನಾ ।।

ತನುಮನ ಹಗುರಾಗಿ ಆ. ಡಿ . ತುsss ।
ಮೊಗದಲ್ಲಿ ಸುಖ ನಗೆಯು ಹಾ. ಯಿ. ತುsss ।
 ಧೀಂ ತನ ಧೀಂ ತನ ಧೀಂ ತನ ನನನಾsss ।।