Tuesday, 26 October 2021

ಅಪ್ಪಾ..ನಿನ್ನ ನೆನಪು

 ಅಪ್ಪಾ..

ನಿನ್ನೆನಪಿನ ಬತ್ತಳಿಕೆಯ ಬಾಣಗಳು 

ಸುತ್ತುವರಿದಿವೆ ನನ್ನೆದೆಯ ಗೂಡಾ.


ಹಲವು ಸವಿಯ ಮೆಲುಕು ..

ಕೆಲವು ನೋವ ಮಿಡಿಪು.


ನೀನಿನ್ನು ನೆನಪು ಎಂಬ ವಾಸ್ತವ..

ಮರಳಿ ಮರಳಿ ಅನಿಸುತಿದೆ..ಇದು ದಿಟವಾ?


ಅಪ್ಪಾ..

Wednesday, 22 September 2021

ರಾತ್ರಿಯಲಿ ಬೆಳದಿಂಗಳಾ

ರಾತ್ರಿಯಲಿ ಬೆಳದಿಂಗಳಾ ।
ಕರೆಯುತಲಿ ಮನೆಯಂಗಳಾ ।
ಸವಿಯುತಲಿ ಮನದಂಗಳಾ ।
ಮರೆಯುತಲಿ ಮನ ವಾಂಛಲಾ ।
ಮೆರೆಯುತಲಿ ಸಿಹಿ ಹಂಬಲಾ ।

Monday, 28 June 2021

ಮರೆಗುಳಿ ಖಾಯಿಲೆಯಲ್ಲಿ ನನ್ನಪ್ಪಾ


ನಮ್ಮನೆ ಅಪ್ಪಾ ನಿದ್ರೆ ಮಾಡ್ತಾ 
ಮಾತೇ ಅಡ್ತ್ನಿಲ್ಲೇssss ।

ಎಂತಾ ಕೇಳ್ದ್ರೂ ಮುಕಮುಕ ನೋಡ್ತಾ 
ಸನ್ನೇನೂ ಮಾಡ್ಟ್ನಿಲ್ಲೇ ss  ।।

ನಮ್ಮನೆ ಅಪ್ಪಾ ಟಿವಿ ನೋಡ್ತಾ 
ಕಿವಿನೇ ಕೇಳ್ಸ್ತೀಲ್ಲೇssss ।

ಬಂದದ್ದೆಲ್ಲಾ ಚಿತ್ರಾ ನೋಡ್ತಾ 
ಹಂದೇ ಆಡ್ತ್ನಿಲ್ಲೇ ss ।।






ಅರ್ಥ:

ಹಂದಾಡುವುದು - ಕುಳಿತಲ್ಲೇ ಆಕಡೆ ಈಕಡೆ ಚಲನ ವಲನ ತೋರಿಸುವುದು 

Sunday, 14 March 2021

ಅವಸsssರ ಮಾಡಬ್ಯಾಡಾ

 ಗಡಿಬಿsssಡಿ  ಗುಂಡಪ್ಪಾ 

ಅವಸsssರ ಮಾಡಬ್ಯಾಡಾ। 


ಒಂದಾssದ ಮೇಲೊಂದು 

ಕೆಲಸಾssನ ಮಾಡ್ಕೊಂಡು ।


ಗಾಡೀssನ ಹೊಡ್ಕೊಂಡು 

ಒಮ್ಮೊಮ್ಮೆ ತಳ್ಕೊಂಡು ।


ಗಡಿಬಿsssಡಿ  ಗುಂಡಪ್ಪಾ 

ಅವಸsssರ ಮಾಡಬ್ಯಾಡಾ। 


ss  --> ರಾಗ ಎಳೆಯುವುದು 

Saturday, 6 March 2021

ಮಾವು

 


ಮಾವಿನ ಆಸ್ವಾದ.
ನೆನಪಿಸಿದೆ
ಬಾಲ್ಯದ ಆಹ್ಲಾದ. 

ಮಳೆ


ನೀ ಬಂದರೆ  ಓಡುವರು  ಎಲ್ಲ
   ಹತ್ತಿರದ ನೆಲೆಗೆ.
ನಿನ್ನಲ್ಲಿ ಮಿಂದವನೇ ಬಲ್ಲ
   ಆ ಸಂತಸದ ಸಲಿಗೆ .


ಗೌಮ್ಯ ನಾನು

ವ್ಯಕ್ತಕೆ ಅತಿರಿಕ್ತ ನಾನು.

ಸ್ನಿಗ್ಧ ಸಾಗರದೊಳು ಲುಪ್ತ ನಾನು.

ಗೌಮ್ಯ ನಾನು.

ಪರಮೇಶ್ವರಾ

ಗಂಗಾಧರಾ ಘಾಟೇಶ್ವರಾ 

ಗವಿಯಲ್ಲಿ ನೆಲೆಯಾದ ಸಿದ್ ಧೇಶ್ವರಾ ।।


ಮುರ್ಡೇಶ್ವರಾ ಚಂಡೇಶ್ವರಾ 

ನೆಲದಲ್ಲಿ ಬಲವಾದ  ಮ್ಹಾ ಬ್ಲೇ ಶ್ವರಾ ।।


ಧಾರೇಶ್ವರಾ ಗುಣೇಶ್ವರಾ 

ನೆನೆದವರ ಮನದಲ್ಲಿ ಮಧುಕೇಶ್ವರಾ ।।


ಸಜ್ಜೇಶ್ವರಾ ಮಂಜೇಶ್ವರಾ 

ಪಾರ್ವತಿಯ ಸಾನ್ನಿಧ್ಯ ಪರಮೇಶ್ವರಾ ।।