ಅಥರ್ವ ನಿನ್ನ ಆಟಾ। ಹಾಸಿದೆ ಒಲವಿನ ತೋಟಾ ।।
ಅಥರ್ವ ನಿನ್ನ ನೋಟಾ । ನಮಗೆ ಅರಿವಿದೆ ತುಂಟಾ ।
ಅಥರ್ವ ನಿನ್ನ ಓಟಾ । ಹಿಡಿವುದೇ ನಮಗೆ ಕಷ್ಟಾ ।।
ಅಥರ್ವ ನಿನ್ನ ಆಟಾ। ಹಾಸಿದೆ ಒಲವಿನ ತೋಟಾ ।।
ನೀ ಬೆಲ್ಲದ ಅಚ್ಚು । ಕರೆವೆ ನಾ ಪೀಕಚ್ಚು ।
ನೀ ಎಲ್ಲರ ನೆಚ್ಚು । ಸುರಿದಿದೆ ಮುದ್ದು ಹೆಚ್ಚು ।।
ಅಥರ್ವ ನಿನ್ನ ಆಟಾ। ಹಾಸಿದೆ ಒಲವಿನ ತೋಟಾ ।।
ಎಮ್ಮನೆ ರಾಜಕುಮಾರಾ । ನಮ್ಮ ಪ್ರೀತಿಯ ಸಾರಾ ।
ನೀ ಕುಲದಾ ಪ್ರವರಾ। ಸಂತಸದಾ ಸರದಾರ ।।
ಅಥರ್ವ ನಿನ್ನ ಆಟಾ। ಹಾಸಿದೆ ಒಲವಿನ ತೋಟಾ ।।