Tuesday, 19 November 2013

ಲಾಲಿ ಹಾಡು

ಲಾಲಿ ಹಾಡು
--------------

ಮಲಗು ಮಲಗು ನೀ ರಾಜ ಕುಮಾರಿ (ರಾಜ ಕುಮಾರಾ)
ಮಲಗು ಮಲಗು ನೀ ಪುಟಾಣಿ  ಕಂದಾ

ಮಲಗು ಮಲಗು ನೀ ಅಮ್ಮನ ಲೋಕ
ಮಲಗು ಮಲಗು ನೀ ಅಪ್ಪನ ಕಣ್ಮಣಿ
ಮಲಗು ಮಲಗು ನೀ ಅಜ್ಜನ ಮುದ್ದು
ಮಲಗು ಮಲಗು ನೀ ಅಜ್ಜಿಯ  ಪ್ರೀತಿ

ಮಲಗು ಮಲಗು ನೀ ರಾ.. ।।


ಗಣಪನು ಬರುವನು ಕನಸಿನಲಿ
ಉಂಡೆಯ ಕೊಡುವನು ಪ್ರೀತಿಯಲಿ
ಆಟವ ಆಡು ನೀ ಇಲಿಯ ಜೊತೆ
ಕೇಳು ನೀ ದೇವರ ಸದ್ಬುದ್ಧಿಯ  ಮತಿ
 
ಮಲಗು ಮಲಗು ನೀ ರಾ.. ।।

Saturday, 7 September 2013

ಚಿಣ್ಣರ ಪದಗಳು

ಮಳೆ ರಾಜ
---------------
ಡುಂ  ರಾಜ ಬಾರಿಸ್ತಾನೆ  , ಡುಂ ಡುಂ ಡುಂ .
ಮಿಂಚ್  ರಾಣಿ ಛಳಕಿಸ್ತಾಳೆ , ಛಳ್ ಛಳ್ ಛಳ್.
ಮಳೆ ರಾಜ ಸುರೀತಾನೆ , ಧೋ ಧೋ ಧೊ.
ಅಮ್ಮ ನಂಗೆ ಚಕ್ಲಿ ಬೇಕು , ಕುರುಂ ಕುರುಂ ಕುರುಂ.


ತಟ್ಟೆ ಚಂದ್ರ
-------------

ಅಮ್ಮ ನಂಗೆ ಊಟ ಬೇಕು। ಬೆಳ್ಳಿ ಬೆಳಕಿನ ತಟ್ಟೇಲಿ ।।
ರಾತ್ರಿ ಬಾನಲಿ ನೋಡ್ತೀವಲ್ಲಾ । ಅದೇ ಗೋಲದ  ತಟ್ಟೆಲೀ ।।
ಮಾವಿನ ಹಣ್ಣ ಬೀಳಸ್ತೀವಲ್ಲಾ । ಅದೇ ಉದ್ದದ  ಕೊಕ್ಕೇಲಿ ।
ಈ ತಟ್ಟೇನೂ  ಬೀಳಿಸ್ಬಿಡು । ಪ್ರೀತಿಲಿ ನಂಗೆ ಅಂತ್ ಹೇಳಿ ।।


ಚಂದ್ರಣ್ಣ
--------
ಚಂದಿರ ನಾನು , ಜೊತೆಗೆ ನಿನ್ನ,
   ಬರುವೆ ಭೂಮಿ ಸುತ್ತಲು.

ಹೇಗೆ ನಾನು , ಬರಲಿ ನಿನ್ನ
   ಬಳಿಗೆ, ನೀನೆ ಹೇಳ್ಬಿಡು .

ನಾನು ನೀನು ಮಾತಾಡೋಣ,
   ಆಟಾನೂ ಆಡೋಣ .

ನಾನು ನಿನ್ನ ಹೆಗಲನು ಹಿಡಿದು
   ಜೋಕಾಲಿ ಆಡುವೆ ಚಂದ್ರಣ್ಣ .








ಮನದೊಡನೆ ಮಾತು

ಜೀವನವು ಸಾಗರವಲ್ಲ, ಇದು ಹರಿಯುವ ನದಿ.
ಪ್ರತಿಯೊಂದು ಕ್ಷಣವೂ ಜಾಗ ಬದಲಾಯಿಸುವ ನೀರು .
-----------------------------
ಸಾವಿನ ಹೆದರಿಕೆ ಬೇಡ,
ಸಾವು ನಿತ್ಯ ಸತ್ಯ.
 --------------------------
ಮನವು ನಿಂತಿದೆ ಚಲಿಸದೆ,
ಜಗವು ಹರಿಯುತಿದೆ ತನ್ನಷ್ಟಕ್ಕೆ .
ಇದೆಂಥ  ಜೀವನ ಬರಡು  ಹೊಲ,
ಯಾವ ದಿಕ್ಕಿಗೂ ಫಲ ಬಿಡದ ಬರಿದೆ ಮರ.
 ----------------------------------

 
----------------------------------------------

Monday, 12 August 2013

we are street dogs

we live under the drain in front of your house.
we come to the car to send  you off to your office
we wait to receive you home in the evening.
we come to you not just for the piece of bread you give,
but because we love you.

ಕಾ .... ಯಕ

ಕಾಯಕವೇ ಕೈಲಾಸ ,
ಯಾರು ಬೈದರೇನು  ಬಿಟ್ಟರೇನು ,
ನನಗಿಲ್ಲ ಬೇರೆ ಧರ್ಮ ,
ಕಾ .... ಯಕವೇ ನನ್ನ ಕೈಲಾಸ .

beware.. I am waitng.


ನನಗಿಲ್ಲ ಸಮಯದ ಪರಿವೆ 
ನಾನಿಲ್ಲಿ ಕಾಯುತ್ತಲೇ ಇರುವೆ . 

 ನನಗ್ಯಾರ  ಹಂಗಿಲ್ಲ, 
ಆದರೆ...  ನನ್ನ ಆಹಾರಕೆ ಮಾತ್ರ ಉಳಿವಿಲ್ಲ.

Nature's gift

ನನ್ನ ಮೈ ಬಣ್ಣ ಇನ್ಯರಿಗಿದೆ ನೋಡಾ ,
ನನ್ನೀ ಕಂಪು ಯಾರಿಗೆ ಬೇಡಾ,
ನನ್ನ ನೋಡೆ ಕಣ್ ತಂಪು, ಮನ ತಂಪು,
ನಾ  ಬೇಡೆ ನಿನ್ನ ಕಾಂಚಾಣದ ಛಾಪು.