Sunday, 14 March 2021

ಅವಸsssರ ಮಾಡಬ್ಯಾಡಾ

 ಗಡಿಬಿsssಡಿ  ಗುಂಡಪ್ಪಾ 

ಅವಸsssರ ಮಾಡಬ್ಯಾಡಾ। 


ಒಂದಾssದ ಮೇಲೊಂದು 

ಕೆಲಸಾssನ ಮಾಡ್ಕೊಂಡು ।


ಗಾಡೀssನ ಹೊಡ್ಕೊಂಡು 

ಒಮ್ಮೊಮ್ಮೆ ತಳ್ಕೊಂಡು ।


ಗಡಿಬಿsssಡಿ  ಗುಂಡಪ್ಪಾ 

ಅವಸsssರ ಮಾಡಬ್ಯಾಡಾ। 


ss  --> ರಾಗ ಎಳೆಯುವುದು 

Saturday, 6 March 2021

ಮಾವು

 


ಮಾವಿನ ಆಸ್ವಾದ.
ನೆನಪಿಸಿದೆ
ಬಾಲ್ಯದ ಆಹ್ಲಾದ. 

ಮಳೆ


ನೀ ಬಂದರೆ  ಓಡುವರು  ಎಲ್ಲ
   ಹತ್ತಿರದ ನೆಲೆಗೆ.
ನಿನ್ನಲ್ಲಿ ಮಿಂದವನೇ ಬಲ್ಲ
   ಆ ಸಂತಸದ ಸಲಿಗೆ .


ಗೌಮ್ಯ ನಾನು

ವ್ಯಕ್ತಕೆ ಅತಿರಿಕ್ತ ನಾನು.

ಸ್ನಿಗ್ಧ ಸಾಗರದೊಳು ಲುಪ್ತ ನಾನು.

ಗೌಮ್ಯ ನಾನು.

ಪರಮೇಶ್ವರಾ

ಗಂಗಾಧರಾ ಘಾಟೇಶ್ವರಾ 

ಗವಿಯಲ್ಲಿ ನೆಲೆಯಾದ ಸಿದ್ ಧೇಶ್ವರಾ ।।


ಮುರ್ಡೇಶ್ವರಾ ಚಂಡೇಶ್ವರಾ 

ನೆಲದಲ್ಲಿ ಬಲವಾದ  ಮ್ಹಾ ಬ್ಲೇ ಶ್ವರಾ ।।


ಧಾರೇಶ್ವರಾ ಗುಣೇಶ್ವರಾ 

ನೆನೆದವರ ಮನದಲ್ಲಿ ಮಧುಕೇಶ್ವರಾ ।।


ಸಜ್ಜೇಶ್ವರಾ ಮಂಜೇಶ್ವರಾ 

ಪಾರ್ವತಿಯ ಸಾನ್ನಿಧ್ಯ ಪರಮೇಶ್ವರಾ ।।

Sunday, 2 September 2018

ಮಳೆ ಹನಿ

ಮಳೆ ಹನಿ

ಹನಿ ಹನಿ ಮಳೆ
ಹನಿಯಾ ಹೊಳೆ ।

ಹರಿದಾ ಸೆಲೆ *
ಒಲಿದಾ ಇಳೆ ।


* ಸೆಲೆ - ಅಂತರ್ಜಲದ ಝರಿ
* ಇಳೆ - ಭೂಮಿ 


ನಗೆ ಹನಿ 

ಹನಿ ಹನಿ ಮಳೆ
ಹನಿಯಾ ಹೊಳೆ ।

ತಿಕ್ಕಿ ತಿಕ್ಕಿ ತೊಳೆ
ಹೋಗುವುದು ಕೊಳೆ ।


* ತಿಕ್ಕು - ಉಜ್ಜು (ಉದಾ. ಪಾತ್ರೆಯನ್ನು ತಿಕ್ಕಿ ತಿಕ್ಕಿ ತೊಳೆ )

Saturday, 28 April 2018

ನನ್ನ ಕರೆದರು ಯಾರೋ

ಎಂಥ  ಸುಂದರ ಮಧ್ಯಾಹ್ನ
ಸೂರ್ಯನ ಬಿಸಿಲು ಬೆಚ್ಚಗೆ
ಬೀಸುವ ಗಾಳಿ ಹಾಯಾಗಿ
ಈ ನಿನ್ನ ಚಿಲಿ ಪಿಲಿ, ಹಾರಾಟ
ಹೆಚ್ಚಿದೆ ಮನಸ ಆಹ್ಲಾದ