Monday, 25 December 2017

ಸಾಗರದ ಅಲೆಯೇ ನಿನ್ನೆಂತು ಬಣ್ಣಿಸಲಿ

ಸಾಗರದ ಅಲೆಯೇ ನಿನ್ನೆಂತು ಬಣ್ಣಿಸಲಿ 

ಕಡಲ ಕಡೆದಾಗ ಹೊಮ್ಮಿದ ಕೆನೆ-ಬೆಣ್ಣೆಯೇ  ನೀ?
ದಡದ ಸಾಮೀಪ್ಯದ ಸಮರಸವೇ ನೀ ?

ಸಾಗರ ಬೀಸಿದ ಮುಗುಳ್ ನಗೆಯೋ  ನೀ ?
ಸಿಟ್ಟಿನ ಬುಸುಗುಡುವಿಕೆಯೋ ನೀ  ?

ಸಡಗರದ ಕಲರವವೋ ನೀ?
ಇಳೆಯ ಕೊರಳ ಹಾರವೋ ನೀ?