ಯಾರಿದು ಯಾರಿದು ಯಾರಿದು
(ಕಟ್ಟೆಯ)ಕೊರೆದು ದಣಪೆಯ ಮಾಡೆಂದು ಕೇಳಿತು
--------------------
ಕಟ್ಟೆ - Compound wall
ದಣಪೆ - ಕಟ್ಟೆಯ ಹೊರಗೆ/ಒಳಗೆ ನಡೆದಾಡಲು ಬಿಟ್ಟಿರುವ ಸಣ್ಣ ಜಾಗ
ಒಳಗಿಂದ ಉಸಿರೆತ್ತಿ ಕೂಗೋದು
ನಾನು ನಾನೇ ?
ನನ್ನೊಳಗೆ ಇನ್ನಾರು ?
ಒಂದು ಮನಸು ಒಡೆದು
ಎಂದು ಎರಡಾಯ್ತು ತಿಳಿಯದು
ಒಂದು ಕೇಳಿತು ಸುತ್ತಲಿನ ಮಾತು
ಕೇಳಿದ ಮಾತು ಕಟ್ಟೆಯಾಗಿ ಸುತ್ತಿತು
ಇನ್ನೊಂದು ಬಿಟ್ಟಿತು ಮಾತು
ಹೊರಗಿನ ಕಟ್ಟೆ ದಪ್ಪವಾಯ್ತು
ಉಸಿರು ಆರುವ ಮುನ್ನ ಮಾಡಿತು
ಮಗದೊಂದು ಯತ್ನ
ಒಳಗಿಂದ ಉಸಿರೆತ್ತಿ ಕೂಗಿತು
(ಕಟ್ಟೆಯ)ಕೊರೆದು ದಣಪೆಯ ಮಾಡೆಂದು ಕೇಳಿತು
--------------------
ಕಟ್ಟೆ - Compound wall
ದಣಪೆ - ಕಟ್ಟೆಯ ಹೊರಗೆ/ಒಳಗೆ ನಡೆದಾಡಲು ಬಿಟ್ಟಿರುವ ಸಣ್ಣ ಜಾಗ